Sunday 10 June 2012

ನಾನು ನನ್ನ ಕವನ

****************************************

ನಾನು ನನ್ನ ಕವನ

(ಮುದ್ದು ಮನಸ್ಸಿನ ಮಾತುಕತೆ)

ಇದು ಕಾಲ್ಪನಿಕ ಕಥೆ ... 

ನಾಳೆ ೦೭:೦೫ ಕ್ಕೆ

http://www.suspensestory.blogspot.com/
*******************************************************************************************************************************************
05 : 05 am .....ಹೆಚ್ಚು ಕಡಿಮೆ ಅದು ಮುಂಜಾನೆಯ ಸೂರ್ಯೋದಯದ ಸಮಯ.. ಆಗಷ್ಟೇ ಸ್ವಲ್ಪ ಸ್ವಲ್ಪ ಬೆಳಕು ಹರಡಲು ಆರಂಭವಾಗಿತ್ತು.. ಜೊತೆಯಲ್ಲಿ ಹನಿ ಹನಿ ಮಳೆಯೂ ಸಹ.. ನಾನು ವಾಕಿಂಗ್ ಜಾಗಿಂಗ್ ಹೋಗುವುದು ಆ ಮಳೆಯಲ್ಲಿ ಹೇಗೆ ಎಂದು ಚಿಂತಿಸುತ್ತಾ ಹಾಗೆಯೇ ಬಾಗಿಲ ಬಳಿ ನಿಂತು ಹೊರಗಿನ ಆ ಮಳೆಯನ್ನು ನೋಡುತ್ತಾ ಮನೆ ಸುತ್ತಲು ಇರುವ ಮರಗಿಡಗಳ ಹಸಿರನ್ನು ನೋಡುತ್ತಾ ಖುಷಿಯಾಗಿ , ಸ್ವಲ್ಪ ಅಲ್ಲಲ್ಲಿ ಬಿಟ್ಟಿದ್ದ ಹೂವುಗಳು , ಹಣ್ಣುಗಳು ತುಂಬಾ ಆಕರ್ಷಣೀಯವಾಗಿ ಕಂಡವು .. ಇದ್ದಕ್ಕಿದ್ದ ಹಾಗೆ ಮಳೆಯೂ ಸಹ ಜೋರಾಯಿತು.. ಇನ್ನೇನು ಈ ದಿನದ ವಾಯುವಿಹಾರ ತಪ್ಪಿದಂತೆ ಎಂದು ಮತ್ತೊಮ್ಮೆ ಚಿಂತಿಸುತ್ತಾ , ಗೋಡೆಯ ಮೇಲೆ ಗಡಿಯಾರವನ್ನು ನೋಡಿದೆ.. ಆಗ ಅಲ್ಲಿ ಸಮಯ ಇನ್ನೂ 05 : 05 am ಆಗಿತ್ತು.. ಆ ಮುಂಜಾನೆಯ ಜುಮು ಜುಮು ಮಳೆಯ ಚಳಿಯಲ್ಲಿ ಗಡಿಯಾರಕ್ಕೂ ಸಹ ತಂಪಾಗಿ ಅದು ತನ್ನ ಕೆಲಸವನ್ನೇ ನಿಲ್ಲಿಸಿರಬಹುದು ಎಂಬ ಆಲೋಚನೆ ಮನದಲ್ಲಿ ಮೂಡಿತ್ತು.. ಹಾಗೆಯೇ ನಾನು ನನ್ನ ರೂಮಿನೊಳಗೆ ಹೋಗಿ , ಅಲ್ಲಿ ಮೇಜಿನ ಮೇಲೆ ಇಟ್ಟಿದ್ದ ನನ್ನ ಕೈಗಡಿಯಾರದಲ್ಲಿ ಎಷ್ಟು ಗಂಟೆ ಎಂದು ನೋಡಲು ಅದನ್ನು ಕೈಯಲ್ಲಿ ಎತ್ತಿಕೊಳ್ಳಲು ಇನ್ನೇನು ನನ್ನ ಕೈಗಳನ್ನು ಮುಂದೆ ಚಾಚುತ್ತಿದ್ದಂತೆಯೇ "ಅಂತೇನಾ ...ಹಮ್ .. ಇಂಕೆಮ್ ಕಾವಾಲ್ಲಿ ... ವೀಲೈತೆ ನಾಲ್ಗು ಮಾಟಲು.. ಕುದಿರಿತೆ ಕಪ್ ಕಾಫಿ" ಅನ್ನುವ ಸದ್ದು .. ಅದು ನನ್ನ ಮೊಬೈಲ್ ರಿಂಗ್ ಆಗಿದ್ದು .. ತಕ್ಷಣ ಆ ಮೊಬೈಲ್ ಕೈಗೆತ್ತುಕೊಂಡು ನೋಡಿದೆ .. ಅದು ಯಾವುದೋ ಅಪರಿಚಿತ ಸಂಖ್ಯೆಯಿಂದ ಕರೆ.. ಇದುವರೆಗೂ ಗೊತ್ತಿಲ್ಲದ ಹೊಸ ನಂಬರ್ .. ನಾನು ಆ ಫೋನ್ ರಿಸೀವ್ ಮಾಡಿ ಹಲೋ ಎಂದು ಕೂಗಿದೆ.. ಆ ಕಡೆಯಿಂದ ಒಂದು ಮಧುರವಾದ ಸಂಗೀತ ಕೇಳಿದಂತೆ ಹುಡುಗಿಯ ಮಾತುಗಳು "ಹಲೋ ನಾನು ಕವನ. ನೀವೇನು ಮಾಡ್ತಾ ಇದ್ದೀರಾ ಈಗ" ಎಂದು ಕೇಳಿದಳು.. ಅಷ್ಟರಲ್ಲೇ ನನ್ನ ಮೊಬೈಲ್ ಸಹ ಸುಮ್ಮನಾದಂತೆ ಅನಿಸಿತು .. ಹೌದು ಆಗ ಅದರ ಬ್ಯಾಟರಿ ಮುಗಿದಿತ್ತು .. ಚಾರ್ಜ್ ಮಾಡಲು ಅದನ್ನು ಪಿನ್ ಹಾಕಿ , ಸ್ವಿಚ್ ಒತ್ತಿ , ಆ ಕವನ ಯಾರೂ ಎಂದು ಯೋಚಿಸುತ್ತಾ ಮತ್ತೆ ನನ್ನ ಕೈಗಡಿಯಾರ ಎತ್ತಿಕೊಳ್ಳಲು ಮುಂದೆ ಹೋಗುತ್ತಿದ್ದಂತೆಯೇ , ಮತ್ತೊಂದು ಸದ್ದು .. ಮನೆಯ ಲ್ಯಾಂಡ್ ಫೋನ್ ರಿಂಗ್ ಆಗುತ್ತಿತ್ತು .. ತಕ್ಷಣ ಅದನ್ನು ಕೈಗೆತ್ತಿಕೊಂಡು ಹಲೋ ಎನ್ನುತ್ತಿದ್ದಂತೆಯೇ ಮತ್ತದೇ ಮಧುರವಾದ ಧ್ವನಿ "ಹಲೋ ನಾನು ಕವನ. ನೀವೇನು ಮಾಡ್ತಾ ಇದ್ದೀರಾ ಈಗ.. ನೀವು ಬರ್ತೀರಾ ಅಂತಾ ನಾನಿನ್ನು ಕಾಯ್ತಾ ಇದ್ದೀನಿ ಅಂಕಲ್" ಎಂದು ಹೇಳಿದಳು.. ಆದರೆ ಆ ಕವನ ಯಾರು ಎನ್ನುವುದೇ ಗೊತ್ತಿಲ್ಲಾ ಮತ್ತು ಅದೇ ಮೊದಲು ಆ ಹೆಸರಿನ ಹುಡುಗಿಯ ಜೊತೆ ಮಾತನಾಡುತ್ತಿರುವುದು .. ಈಗ ಮನದಲ್ಲಿ ವಿವಿಧ ಆಲೋಚನೆಗಳು ಅಲೆದಾಡಲು ಆರಂಭವಾದವು .. ಯಾರವಳು ಕವನ .. ಯಾರವಳು ಕವನ .. ?? ಇದೊಂದೇ ಪ್ರಶ್ನೆ ಮನದಲ್ಲಿ ಹಲವಾರು ಸಾರಿ ಗುನುಗಿದಂತೆ ಭಾಸವಾಯಿತು .. ಹಾಗೆಯೇ ಚಿಂತಿಸುತ್ತಾ "ಯಾರು ನೀನು ಕವನ" ಎಂದು ಕೇಳಿದೆ.. ಅವಳಿಗೆ ಆಶ್ಚರ್ಯ ಹೆಚ್ಚಿದಂತೆ "ಹಾ ಇದೇನು ಅಂಕಲ್ ಈ ರೀತಿ ಕೇಳ್ತೀರಾ , ನಾನು ಕವನ......." ಹೀಗೆ ಅವಳು ಮುಂದೆ ಮಾತಾಡುವಷ್ಟರಲ್ಲಿ ಬಾಗಿಲ ಬಳಿ ಯಾರೋ ಬಂದಂತೆ ಕಿಟಕಿಯಲ್ಲಿ ಕಾಣಿಸಿತು .. ಆಗ ಫೋನ್ ಅಲ್ಲಿ "ಒಂದು ನಿಮಿಷ ಹೋಲ್ಡ್ ಮಾಡು" ಎಂದು ಹೇಳಿ ಬಾಗಿಲನ್ನು ತೆಗೆಯಲು ಹೋದೆ.. ಹತ್ತಿರ ಹೋಗುತ್ತಿದ್ದಂತೆಯೇ ಕಿಟಕಿಯಲ್ಲಿ ಕಾಣಿಸಿದ್ದು , ಬಾಗಿಲ ಮುಂದೆ ಒಂದು ಹುಡುಗಿ ನಿಂತಿದ್ದಾಳೆ .. ಯಾರಿರಬಹುದು ಎನ್ನುವ ಯೋಚನೆಯಲ್ಲಿ ಬಾಗಿಲನ್ನು ತೆಗೆದು ನೋಡಿದೆ.. ಆಗ ಹೊರಗೆ ಮಳೆಯೂ ಸಹ ನಿಂತಿತ್ತು .. ಆದರೆ ಮರಗಿಡಗಳ ಮೇಲೆ ನೀರಿನ ಹನಿಗಳು ಮುತ್ತಿನಂತೆ ಮಿಂಚುತ್ತಿದ್ದವು .. ಮತ್ತೆ ಹುಡುಗಿಯನ್ನು ನೋಡಿದೆ . ಸುಮಾರು ಇಪ್ಪರಿಂದ ಇಪ್ಪತ್ತೈದರ ವಯಸ್ಸಿನವಳಂತೆ ಅನಿಸಿದಳು .. ನೋಡಲು ಅತೀ ಸೌಂದರ್ಯವಂತೆ ಹಾಗೂ ವೇಷಭೂಷಣಗಳನ್ನು ನೋಡಿದರೆ ತುಂಬಾ ಶ್ರೀಮಂತ ಕುಟುಂಬದವಳು ಎನ್ನುವಂತೆ ಕಾಣುತ್ತಿದ್ದಳು .. ನಾನು ಮಾತನಾಡುವ ಮೊದಲೇ ಅವಳು ತನ್ನ ಮಾತುಗಳನ್ನು ಆರಂಭಿಸಿದಳು "ಅಂಕಲ್ ನಾನೇ ಕವನ" ಈಗಷ್ಟೇ ನಿಮ್ಮ ಜೊತೆ ಫೋನ್ ಅಲ್ಲಿ ಮಾತಾಡಿದ್ದು ನಾನೇ.. ನಾನು ನಿಮ್ಮ ಮನೆ ಹೊರಗೆ ಇದ್ದೀನಿ , ಡೋರ್ ಓಪನ್ ಮಾಡಿ ಅಂಕಲ್ ಅಂತಾ ಹೇಳೋಕ್ಕೆ ಫೋನ್ ಮಾಡಿದ್ದು , ಆದರೆ ನೀವು ಮಧ್ಯದಲ್ಲೇ ಮಾತು ನಿಲ್ಲಿಸಿ ಬಾಗಿಲು ತೆಗೆದಿರಿ" ಎಂದಳು .. ಅವಳ ಮಾತುಗಳನ್ನು ಕೇಳಿ ನನ್ನ ತಲೆಯಲ್ಲಿ ಹಕ್ಕಿಗಳು ಹಾರಿದಂತೆ ಅನಿಸಿತು .. ಸರಿ ಸರಿ ನಾನು ಸಹ ಹೇಳಿದೆ "ಯಾರು ನೀನು , ನಿನ್ನ ನೋಡ್ತಿರೋದು ಇದೇ ಮೊದಲು.. ಕವನ ನೀನು ಯಾರು ನನ್ನ ಅಂಕಲ್ ಅಂತಾ ಕರಿತಿದ್ದೀಯ , ನಾನು ನಿನಗೆ ಇದಕ್ಕೂ ಮೊದಲು ಗೊತ್ತಾ , ಹೌದು ನನ್ನ ಮನೆ ಫೋನ್ ನಂಬರ್ , ಮೊಬೈಲ್ ನಂಬರ್ ಕೊಟ್ಟಿದ್ದು ಯಾರು" ಅಂತಾ ಕೇಳಿದೆ.. ಅದಕ್ಕೆ ಅವಳು ಕೊಟ್ಟ ಉತ್ತರ ಕೇಳಿ ನನ್ನ ಎದೆಯಲ್ಲಿ ನಡುಕ ಉಂಟಾಯಿತು .. ಮುಂದೇನು ಹೇಳುವುದು ಎಂದು ತಿಳಿಯದೆಯೇ .. ಅವಳನ್ನು ವಿವರವಾಗಿ ಹೇಳಲು ಕೇಳಿದೆ.. ~~~~~~~~~~~~~~~>>>>>>>
(ಮುಂದುವರೆಯುವುದು ....)




ನಾನು ನನ್ನ ಕವನ ***** ಮುಂದುವರೆದ ಭಾಗ..... >>>>>>> :)

1 comment:

  1. ಹಳೆಯ ದಿನಗಳ ನೆನಪು ಸದಾ ಕಾಡುವ ಹುಣ್ಣು.

    ಗೆಳೆಯ ನಿಮ್ಮ ನಿರೂಪನಾ ಕೌಶಲ್ಯದಲ್ಲಿ ಒಂಥರಾ ಜಾದೂ ಇದೆ. ಓದಿಸಿಕೊಂಡು ಹೋಗುವ ಕಲೆ ನಿಮಗೆ ಸಿದ್ಧಿಸಿದೆ.

    ಮುಂದಿನ ಭಾಗಕ್ಕಾಗಿ ಕಾಯುತ್ತೇನೆ.

    ReplyDelete